Thursday 5 May 2016

ಒಂದು ಆಧುನಿಕ ಪ್ರೇಮಪತ್ರವು...


(ಕಾಲೇಜಿನಲ್ಲಿದ್ದಾಗ ಬರೆದಿದ್ದ ಇದು ನಿನ್ನೆ ಮನೆ ಕ್ಲೀನ್ ಮಾಡುವಾಗ ಹಳೇ ಸಾಮಾನುಗಳ ಬಾಕ್ಸಿನಲ್ಲಿ ಸಿಕ್ಕಿತು! ವಾರಕ್ಕೊಂದು ಪ್ರೇಮಪತ್ರ ಬರೀತಾ ಇದ್ರೆ, ಮನುಷ್ಯನಿಗೆ ವಯಸ್ಸೇ ಆಗಲ್ಲ ಅಂತಾ ಎಲ್ಲೋ ಓದಿದ್ದು ನೆಪವಾಗಿ ತುಂಬಾ frequent ಆಗಿ ಇಂಥದ್ದನ್ನು ಬರೀತಿದ್ದೆ. ಆದರೆ ಈಗ ಏನು ಮಾಡಿದರೂ ವಯಸ್ಸಾಗೋದನ್ನ ತಡೆಯೋಕಾಗಲ್ಲ ಅನ್ನೋ realization ಆಗಿದೆ. ಈಗ ವಾಟ್ಸಾಪ್ಪ್, ಫೇಸ್'ಬುಕ್ಕುಗಳ ಕಾಲದಲ್ಲಿ ಯಾವ ಹುಡಗನೂ ತನ್ನ ಹುಡುಗಿಗೆ ಪ್ರೇಮಪತ್ರ ಬರೆಯೋದಿಲ್ಲ! ನನ್ನ ಮನಸ್ಸು ಕೂಡಾ ಇಂಥದ್ದರ ಕುರಿತು ಯೋಚಿಸುವುದನ್ನು ಬಿಟ್ಟು ನಿಧಾನವಾಗಿ ಪುರಾಣ, ಅಧ್ಯಾತ್ಮ, ಕ್ವಾಂಟಂ ಫಿಸಿಕ್ಸ್ ಕಡೆಗೆ ವಾಲುತ್ತಿದೆ. In fact I am too old to write these kind of idiotic stuffs anymore! ಬಹುಶಃ ನನ್ನ ಕೊನೆಯ ಪ್ರೇಮಪತ್ರ ಇದು!)


My dear juni....

ಎಲ್ಲಿ ಹಾಳಾಗಿ ಹೋಗಿದ್ದೆ ನೀನು ಬೆಳಿಗ್ಗೆಯಿಂದ? ಹೀಗೆ ಪದೇ ಪದೇ ಕೋಪಿಸಿಕೊಂಡು ಮಕ್ಕಳ ಹಾಗೆ ಮನೆ ಬಿಟ್ಟು ಹೋದರೆ ನಾನು ಒಬ್ಬಳೇ ಇಡೀ ದಿನ ಹೇಗಿರಲಿ ಹೇಳು? ವಾರವಿಡೀ ಕಂಪನಿಯಲ್ಲಿ ಕತ್ತೆಯ ಹಾಗೆ ದುಡಿದು, ವೀಕೆಂಡನ್ನಾದರೂ ನಿರುದ್ಯೋಗಿ ಗಂಡನ ಜೊತೆ ಕಳೆಯೋಣವೆಂದರೆ, ನನ್ನ ಪೆದ್ದುಗುಂಡ ಗಂಡ ಇವತ್ತೇ ನಾಪತ್ತೆ! ಬೆಳಿಗ್ಗೆ ಬೆಳಿಗ್ಗೆ ನಿನ್ನ ಷರ್ಟು ಹರಿದು, ತಲೆಗೂದಲು ಕೆದರಿ ಹಾಕಿ, ಬೆನ್ನಿನ ಮೇಲೆ ನಾಲ್ಕು ಗುದ್ದುವಷ್ಟು ಕೋಪ ಬಂದಿತ್ತು ನಿನ್ನ ಮೇಲೆ! Sorry baby! ತಪ್ಪು ನಂದಲ್ಲ ಕಣೋ! ನಾನು ಬೇಕೂ ಅಂತಾ ನಿನ್ನ ಮೇಲೆ ಕೋಪ ಮಾಡ್ಕೊಳ್ಳಲಿಲ್ಲ, I swear! ನಿನ್ನೆ ಸಂಜೆಯಿಂದಲೇ ವಿಷ ಕುಡಿದು ಸತ್ತು ಹೋಗ್ಬೇಕು ಅನ್ನಿಸುವಷ್ಟು severe ಆದ ಹೊಟ್ಟೆನೋವು! ರಾತ್ರಿಯಿಡೀ ನಾನು ನಿದ್ದೆ ಇಲ್ಲದೇ ಹೊರಳಾಡುತ್ತಿದ್ದರೆ, ನೀನು ಹಾಳಾದೋನು ಪಕ್ಕದಲ್ಲೇ ಮಲಗಿ ಗೊರಕೆ ಹೊಡೆಯುತ್ತಿದ್ದೆ! ಆಗಲೇ ನಿನ್ನ ಕೊಂದು ಹಾಕ್ಬೇಕು ಅನ್ನಿಸುವಷ್ಟು ಕೋಪ ಬಂದಿತ್ತು, ಹೇಗೋ ತಡೆದುಕೊಂಡೆ. ಆದ್ರೆ ಯಾವಾಗ ನೀನು ಬೆಳಿಗ್ಗೆ ಎದ್ದವನೇ "ನಂಗೀಗ್ಲೇ ಕಾಫಿ ಬೇಕೂ!" ಅಂತಾ ಮತ್ತೆ ಮತ್ತೆ ನನ್ನ irritate ಮಾಡೋಕೆ ಶುರು ಮಾಡಿದೆಯೋ ಅದೆಲ್ಲಿತ್ತೋ ಕೋಪ, I literally fired at you! ನೀನು ತಬ್ಬಿಕೊಂಡು ಸಮಾಧಾನ ಮಾಡ್ತೀಯಾ ಅಂದ್ಕೊಂಡ್ರೆ, "ನಿಂಗೊಬ್ಳಿಗೇ ಕೋಪ ಬರೋದಲ್ಲ, ನಂಗೂ ಬರುತ್ತೆ" ಎಂದವನೇ ರಪ್ಪಂತ ಮನೆ ಬಾಗಿಲು ಹಾಕಿಕೊಂಡು, ನಿನ್ನ ಬುಲೆಟ್ಟು ಸ್ಟಾರ್ಟ್ ಮಾಡಿಕೊಂಡು ಹೋಗಿಯೇ ಬಿಟ್ಟೆ! ನೀನು ಹೋದ ತಕ್ಷಣ ಶುರುವಾದ ನನ್ನ ಅಳು ಮಧ್ಯಾಹ್ನದವರೆಗೂ ನಿಲ್ಲಲಿಲ್ಲ. ಷವರ್ ಕೆಳಗೆ ಒಂದು ಘಂಟೆ ನಿಂತರೂ ನನ್ನ ಸಿಟ್ಟು ಆರಲಿಲ್ಲ! ಆದರೆ ಯಾವಾಗ ಕನ್ನಡಿಯ ಮುಂದೆ ಕುಳಿತು ಕೂದಲಿನ ಸಿಕ್ಕು ಬಿಡಿಸ್ತಾ ಇರುವಾಗ, ಕುತ್ತಿಗೆಯ ಇಳಿಜಾರಿನ ಮೇಲೆ ನೀನು ಮೂಡಿಸಿದ ಹಲ್ಲಿನ ಗುರುತು ಕಾಣಿಸಿತೋ; ಅಲ್ಲಿಗೆ ನನ್ನ ಕೋಪವೆಲ್ಲಾ ಇಳಿದುಹೋಗಿ ನಾಚಿಕೆಯಾಗಿ ಮುಖ ಮುಚ್ಚಿಕೊಂಡೆ! ರಾಕ್ಷಸ ಕಣೋ ನೀನು! ತಿಂಗಳು ನೀನು ಕೊಟ್ಟ ಲವ್ ಬೈಟುಗಳನ್ನೆಲ್ಲಾ ಒಂದು ಕಡೆ ರಾಶಿ ಹಾಕಿ ಲೆಕ್ಕ ಮಾಡಿದರೆ, ವಿರಾಟ್ ಕೊಹ್ಲಿ ಕೂಡಾ ವರ್ಷ ಅಷ್ಟು ರನ್ ಹೊಡೆದಿಲ್ಲ ಅನ್ಸುತ್ತೆ! ವಿಷಯದಲ್ಲಿ ನಾನು ಅದೃಷ್ಟವಂತೆ; ಸ್ವಲ್ಪ ಲೂಸು ಅನ್ನೋದು ಬಿಟ್ರೆ, ನನ್ನ ಮೂವರು ಗಂಡಂದಿರಲ್ಲಿ (ಶಾರುಖ್, ಸಿದ್ಧಾರ್ಥ್ ಮಲ್ಹೋತ್ರ ಮತ್ತು ನೀನು) ನೀನೇ ಹೆಚ್ಚು ರೊಮ್ಯಾಂಟಿಕ್ ಕಣೋ rascal!

       ನೀನು ಹೀಗೆ ಒಬ್ಬಳೇ ನನ್ನ ಬಿಟ್ಟುಹೋದಾಗಲೆಲ್ಲಾ ನಂಗೆ ತುಂಬಾ ನೆನಪಾಗೋದು ನನ್ನ ಡ್ಯಾಡಿ! ಅಪ್ಪ ಒಂದು ದಿನಕ್ಕೂ ನಿಂಥರಾ ನನ್ನ hurt ಮಾಡಿರಲಿಲ್ಲ (I luv my daddy & I hate you!). ನಾನು ಹುಟ್ಟಿದ ದಿನ ಮೈಸೂರಿನಲ್ಲಿ ಜೋರು ಮಳೆ ಬಂದಿತ್ತು ಅಂತಾ ಅಪ್ಪ ಯಾವಾಗಲೂ ನೆನಪು ಮಾಡ್ಕೊತಿದ್ರು. ಅಪ್ಪ ತುಂಬಾ ಆಸೆಯಿಂದ ನಂಗೆ ಇಟ್ಟಿದ್ದ ಹೆಸರು ಶ್ರೀಗೌರಿ. ಆದರೆ ಮಮ್ಮಿಗೆ ಹೆಸರು ಸ್ವಲ್ಪವೂ ಇಷ್ಟ ಆಗದೆ, ನನ್ನ ಹೆಸರನ್ನು 'ಮಯಾಂಕಾ' ಎಂದು ಬದಲಿಸಿದ್ದಳು. ಅಪ್ಪನ ಹತ್ತಿರ ಒಂದು ನೀಲಿ ಬಣ್ಣದ ಸ್ಕೂಟರ್ ಇತ್ತು. ಅವರು ಸ್ಕೂಟರ್ ಹತ್ತಿ ಎಲ್ಲಿಗೇ ಹೋದ್ರೂ ನನ್ನನ್ನೂ ಕರೆದುಕೊಂಡು ಹೋಗದೇ ಇರುತ್ತಿರಲಿಲ್ಲ. ಸ್ಕೂಟರ್ ಹ್ಯಾಂಡಲ್ ಹಿಡಿದುಕೊಂಡು, ಅಪ್ಪನ ಕಾಲುಗಳ ಮಧ್ಯೆ ನಿಂತುಕೊಂಡು ಚಾಮುಂಡಿ ಬೆಟ್ಟಕ್ಕೆ ಹೋಗೋದಂದ್ರೆ ಎಲ್ಲಿಲ್ಲದ ಥ್ರಿಲ್ಲ್ ನಂಗೆ! ಅಪ್ಪ ಒಂದು ಕ್ಷಣ ಕೂಡಾ ನಂಗೆ ನೆಲದ ಮೇಲೆ ಕಾಲಿಡೋಕೆ ಬಿಡುತ್ತಿರಲಿಲ್ಲ, ಯಾವಾಗಲೂ ಅವರ ಸೊಂಟದ ಮೇಲೆ ಎತ್ತಿಕೊಂಡೇ ಇರುತ್ತಿದ್ದರು (ನೀನೂ ಇದೀಯಾ waste body!). ನಾನು ಅವರ ಮೀಸೆ ಹಿಡಿದು ಎಳೆಯುತ್ತಿದ್ದೆ, ಅವರ ಗಡ್ಡಕ್ಕೆ ನನ್ನ ಕೆನ್ನೆ ಉಜ್ಜಿ ಕಚಗುಳಿಯಾದಾಗ ನಗುತ್ತಿದ್ದೆ; ಅವರ ಕೂದಲನ್ನು ಬಾಚಿ, pony ಕಟ್ಟಿ ಚಪ್ಪಾಳೆ ತಟ್ಟುತ್ತಿದ್ದೆ. ಅವರು ನನ್ನನ್ನು ತಮ್ಮ ತೋಳಲ್ಲಿ ಎತ್ತಿಕೊಂಡು, ಬೆನ್ನು ಸವರುತ್ತಾ ನಿದ್ದೆ ಮಾಡಿಸಲಿ ಅನ್ನೋ ಒಂದೇ ಒಂದು ಆಸೆಯಿಂದ, ನಾನು ಸುಳ್ಳು ಸುಳ್ಳೇ ನಿದ್ದ ಬಂದೋರ ಹಾಗೆ act ಮಾಡುತ್ತಿದ್ದೆ! ದಿನಾ ರಾತ್ರಿ ಅವರ ಬಣ್ಣ ಬಣ್ಣದ ಕುರ್ತಾಗಳನ್ನೇ ನೈಟಿಯ ಹಾಗೆ ಹಾಕಿಕೊಂಡು, ನನ್ನ ಟೆಡ್ಡಿಬೇರ್ ಸಮೇತ ಅವರನ್ನು ತಬ್ಬಿಕೊಂಡು ಮಲಗುತ್ತಿದ್ದೆ. ಮಧ್ಯಾಹ್ನ ಅವರು ಮಲಗಿದ್ದಾಗ, ಎದೆಯ ಮೇಲೆ ಹತ್ತಿ ಕುಳಿತು; ಅವರ ಹೊಟ್ಟೆಯ ಮೇಲೆ ಪೆನ್ನಿನಿಂದ ನನ್ನ ಹೆಸರು ಗೀಚುತ್ತಿದ್ದೆ. ಹೊಡೆಯುವ ಮಾತು ಹಾಗಿರಲಿ, ಒಂದು ದಿನ ಸಹಾ ಅಪ್ಪ ನನ್ನ ಜೊತೆ ಹೈ ಪಿಚ್ಚಲ್ಲಿ ಕೂಡಾ ಮಾತಾಡಲಿಲ್ಲ. ಆದರೆ ಮಮ್ಮಿ ಮಾತ್ರ ಹೊಡೆಯುತ್ತಿದ್ದಳು. ಪ್ರೊಗ್ರೆಸ್ ರಿಪೋರ್ಟ್ ತೋರಿಸಿದರೆ, "ಇಷ್ಟು ಕಮ್ಮಿ ಮಾರ್ಕ್ಸ್ ತೆಗೆದಿದ್ದೀಯಲ್ಲಾ, ನಾಚ್ಕೆ ಆಗಲ್ವಾ ನಿಂಗೆ? ನಿನ್ನ ಫ್ರೆಂಡ್ ಜಾಹ್ನವಿ ಕಾಲಡಿಯಲ್ಲಿ ನುಗ್ಗು, ಸ್ವಲ್ಪ ಬುದ್ಧಿನಾದ್ರೂ ಬರುತ್ತೆ! ನೀನೂ ನಿಮ್ಮಪ್ಪನ ಥರಾ ಆಗ್ಬಾರ್ದು ಅಂತಾ ನಾನಿಲ್ಲಿ ಕಷ್ಟ ಪಡ್ತಿದ್ರೆ, ಓದೋಕೇನು ರೋಗ ನಿಂಗೆ" ಎಂದು ಬೆನ್ನ ಮೇಲೆ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದಳು. ಮನೆಗೆ ಯಾರಾದರೂ ಗೆಸ್ಟ್'ಗಳು ಬಂದ್ರೆ, "ನೋಡಿ, ನನ್ ಮಗ್ಳು ಡ್ಯಾನ್ಸಲ್ಲಿ ಸೆಕೆಂಡ್ ಪ್ರೈಜ್ ತಗೊಂಡಿದಾಳೆ. ಮಯಾಂಕಾ, ಬಾ ಇಲ್ಲಿ ಆಂಟಿಗೆ angel dance ಮಾಡಿ ತೋರಿಸು" ಎನ್ನುತ್ತಿದ್ದಳು. ನಾನು ಮಾಡದೇ ಇದ್ದರೆ, ಗೆಸ್ಟ್'ಗಳೆಲ್ಲಾ ಹೋದ ಮೇಲೆ "ಮನೆಗೆ ಬಂದೋರ ಜೊತೆ mingle ಆಗೋಕೂ ಬರಲ್ವಾ ನಿಂಗೆ, ಕತ್ತೆ! ಇವತ್ತು ರಾತ್ರಿ ಊಟ ಇಲ್ಲ, ಹಾಗೆ ಬಿದ್ಕೋ!" ಎಂದು ಕಿವಿ ಹಿಂಡಿ ಕೆನ್ನೆ ಮೇಲೆ ರಪ ರಪ ಅಂತಾ ಬಾರಿಸುತ್ತಿದ್ದಳು. ಅಪ್ಪ ಅಮ್ಮ ಒಂದೇ ಮನೆಯಲ್ಲಿದ್ದರೂ ಒಬ್ಬರನ್ನೊಬ್ಬರು ಮಾತಾಡಿಸುತ್ತಿರಲಿಲ್ಲ. ಆದರೆ ಅಮ್ಮ ನನ್ನನ್ನು ಹೊಡೆಯುವಾಗ ಮಾತ್ರ "ಇಷ್ಟು ಪುಟ್ಟ ಮಗು ಮೇಲೆ ಕೈ ಮಾಡ್ತೀಯಲ್ಲಾ, ಮನ್ಸಾದ್ರೂ ಹೇಗೆ ಬರುತ್ತೆ ನಿಂಗೆ" ಅಂತಾ ಓಡಿಬಂದು ಅಳುತ್ತಿದ್ದ ನನ್ನ ಗಟ್ಟಿಯಾಗಿ ತಬ್ಬಿಕೊಂಡು "ಅಳ್ಬಾರ್ದು ಮಗ್ಳೇ, ಗುಡ್ ಗರ್ಲ್ ಅಲ್ವಾ ನೀನು" ಎಂದು ಸಮಾಧಾನ ಮಾಡುವಷ್ಟರಲ್ಲಿ ಅಪ್ಪನ ಕಣ್ಣುಗಳಲ್ಲಿ ನೀರು ತುಂಬಿರುತ್ತಿತ್ತು. ಡ್ಯಾಡೀನೇ ಅಳೋದು ನೋಡಿ ಅವರನ್ನು ಹೇಗೆ console ಮಾಡೋದು ಅಂತಾ ಗೊತ್ತಾಗದೆ, ಗಾಬರಿಯಾಗಿ ನಾನು ಅಳು ನಿಲ್ಲಿಸುತ್ತಿದ್ದೆ! ಮಮ್ಮಿ ನಂಗೆ ರಾತ್ರಿ ಊಟ ಹಾಕದೆ punishment ಕೊಟ್ಟಾಗಲೆಲ್ಲಾ, ಅಪ್ಪ ನನ್ನ ಕರೆದುಕೊಂಡು ಚೂರೂ ಸದ್ದಾಗದ ಹಾಗೆ ಕಿಚನ್ನಿನೊಳಗೆ ಹೋಗಿ, ಒಂದು ಕೈಯಲ್ಲಿ ನನ್ನ ಎತ್ತಿಕೊಂಡೇ, ಇನ್ನೊಂದು ಕೈಯಲ್ಲಿ ಘಮ್ಮೆನ್ನುವ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡಿ ಟೆರೇಸಿನ ಮೆಟ್ಟಿಲುಗಳ ಮೇಲೆ ತೊಡೆ ಮೇಲೆ ನನ್ನ ಕೂರಿಸಿಕೊಂಡು ತಿನ್ನಿಸುತ್ತಿದ್ದರು. ಒಂಭತ್ತನೇ ವರ್ಷದ birthday ಹಿಂದಿನ ರಾತ್ರಿ ಕೂಡಾ ಅಪ್ಪ ನನ್ನ ಹೀಗೆಯೇ ತೊಡೆ ಮೇಲೆ ಕೂರಿಸಿಕೊಂಡು ಊಟ ಮಾಡಿಸಿದ್ದರು. ಅಪ್ಪನ ಕೈಲಿ ಕೆಲಸ ಇರಲಿಲ್ಲ, ಹಾಗಾಗಿ usually ದುಡ್ಡು ಕೂಡಾ ಇರುತ್ತಿರಲಿಲ್ಲ. ನಾನು ಸ್ಕೂಲಿಗೆ ಹೋದ ಮೇಲೆ ತಮ್ಮ ರೂಮಲ್ಲಿ ಕೂತು ಬುದ್ಧನ ಪೇಂಟಿಂಗುಗಳನ್ನು ಮಾಡುತ್ತಿದ್ದರು. ಪ್ರತೀ ವರ್ಷ ನನ್ನ birthdayಗೆ ಹದಿನೈದು ದಿನ ಮುಂಚೆ ತಮ್ಮ ಪೇಂಟಿಂಗುಗಳನ್ನು ರಸ್ತೆ ಬದಿಯಲ್ಲಿ ನೀಟಾಗಿ ಜೋಡಿಸಿ ಕೇಳಿದ ಬೆಲೆಗೆ ಮಾರುತ್ತಿದ್ದರು. ಹಾಗೆ ಒಟ್ಟಾದ ದುಡ್ಡಿನಲ್ಲಿ, ನನ್ನ birthday ಬೆಳಿಗ್ಗೆ ಹೊಸಾ ಫ್ರಾಕು, ಚಾಕೊಲೆಟ್'ಗಳನ್ನು ಗಿಫ್ಟ್ ಕೊಡುತ್ತಿದ್ದರು.

ಅಪ್ಪಾ ನಂಗೆ ವರ್ಷ ಫ್ರಾಕ್ ಬೇಡ, ಫ್ರೆಂಡ್ಸೆಲ್ಲಾ ಉದ್ದಲಂಗ ತಗೊಂಡಿದಾರೆ, ನಂಗೂ ಅದೇ ಥರ ಗ್ರೀನ್ ಕಲರ್ ಉದ್ದಲಂಗನೇ ಬೇಕೂ ಅಂತಾ ಹಠ ಹಿಡಿದಿದ್ದೆ ನಾನು. ನನ್ನ birthday ಬೆಳಿಗ್ಗೆ ಕಚಗುಳಿ ಕೊಟ್ಟು ಎಬ್ಬಿಸಿದ ಅಪ್ಪನ ಕೈಲಿ ಉದ್ದಲಂಗ ಮತ್ತು ದೊಡ್ಡದೊಂದು ಡೈರಿಮಿಲ್ಕ್ ಇತ್ತು! ಅವತ್ತು ಅಪ್ಪನೇ ನಂಗೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ, ಉದ್ದಲಂಗ ತೊಡಿಸಿ, ತಲೆ ಬಾಚಿ, ಜಡೆ ಹಾಕಿ, ಕೆನ್ನೆಗಳಿಗೆ ಪೌಡರ್ ಹಚ್ಚಿ ಸ್ಕೂಲಿಗೆ ಬಿಟ್ಟು ಬಂದಿದ್ದರು. ಮಧ್ಯಾಹ್ನ ಲಂಚ್ ಬ್ರೇಕಲ್ಲಿ ಮಮ್ಮಿಯ ಕಾರ್ ಡ್ರೈವರ್ ಬಂದು "ನೀವು ಬರ್ಬೇಕಂತೆ" ಅಂತಷ್ಟೇ ಹೇಳಿ ಮನೆಗೆ ಕರೆದುಕೊಂಡು ಹೋದ. ಮನೆ ಮುಂದೆ ಯಾವತ್ತೂ ನೋಡಿರದಷ್ಟು ಜನ. ಮನೆಯ ವರಾಂಡದಲ್ಲಿ ಅಪ್ಪ ಬಿಳೀ ಬಟ್ಟೆ ಹೊದ್ದುಕೊಂಡು ಮಲಗಿದ್ದರು! My hero, my best friend, my daddy was no more!! ಅವತ್ತು ಹೆಣದ ಹತ್ತಿರದಲ್ಲಿ ನಿಂತಿದ್ದ ಯಾರೋ ಆಡುತ್ತಿದ್ದ ಮಾತುಗಳು ಇನ್ನೂ ಸ್ಪಷ್ಟವಾಗಿ ನೆನಪಿದೆ, "Poor fellow! ಇಪ್ಪತ್ತು ವರ್ಷಕ್ಕೇನೇ International art eventಗಳಲ್ಲಿ awards ತಗೊಂಡಿದ್ದ, ಮನಸ್ಸು ಮಾಡಿದ್ದರೆ M F Hussain, B K S Verma ಥರಾ ಬೆಳೆಯಬಹುದಿತ್ತು. ಲಕ್ಷಾಂತರ ಬೆಲೆಬಾಳೋ ಪೇಂಟಿಂಗುಗಳನ್ನ ಫುಟ್'ಪಾತಲ್ಲಿ ಚಿಲ್ಲರೆ ಬೆಲೆಗೆ ಮಾರುತ್ತಿದ್ದ. ತುಂಬಾ lunatic ಮನುಷ್ಯ ... "ಅಪ್ಪ ನನ್ನ ಬಿಟ್ಟುಹೋದ ಒಂದು ವರ್ಷಕ್ಕೆ ಮಮ್ಮಿ ಇನ್ನೊಂದು ಮದುವೆಯಾದಳು. ನಾನು ಮನೇಲಿದ್ರೆ ತನ್ನ privacy ಹಾಳಾಗುತ್ತೆ ಅಂತಾ residential ಸ್ಕೂಲಿಗೆ ಸೇರಿಸಿದಳು. ಪ್ರತೀ ತಿಂಗಳು ಅಕೌಂಟಿಗೆ ದುಡ್ಡು ಬಂದು ಬೀಳುತ್ತಿತ್ತು. ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ರಾತ್ರಿ ತಬ್ಬಿಕೊಂಡು ಮಲಗೋಕೆ, ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸೋಕೆ ಅಪ್ಪ ಇರಲಿಲ್ಲ! Birthdayಗೆ ಎರಡು ದಿನ ಮುಂಚೆ ಮನೆಯಿಂದ ಗಿಫ್ಟ್ ಬಾಕ್ಸುಗಳು ಬಂದು ಬೀಳುತ್ತಿದ್ದವು. ಅವನ್ನು ತೆರೆದು ನೋಡಲು ಕೂಡಾ ನಂಗೆ ಮನಸ್ಸಾಗುತ್ತಿರಲಿಲ್ಲ. ಅಪ್ಪ ಕೊನೆಯ ಸಲ ಕೊಡಿಸಿದ್ದ ಉದ್ದಲಂಗವನ್ನೇ birthday ದಿನ ಹಾಕಿಕೊಂಡು, ರೂಮಿನಲ್ಲಿ ಒಬ್ಬಳೇ ಅಳುತ್ತಾ ಮಲಗುತ್ತಿದ್ದೆ. ಇವತ್ತು ಕೂಡಾ ಹಸಿರು ಉದ್ದಲಂಗ ಮತ್ತು ಅದರ ಜೊತೆ ಅಪ್ಪ ಕೊಟ್ಟಿದ್ದ diary milk wrapper ಎರಡನ್ನೂ ನನ್ನ jewelleryಗಿಂತ ಜೋಪಾನವಾಗಿ ಇಟ್ಟುಕೊಂಡಿದ್ದೇನೆ!

ವರ್ಷಗಳು ಕಳೆದಂತೆಲ್ಲಾ ಅಪ್ಪನನ್ನು ಹೆಚ್ಚು ಹೆಚ್ಚು ಮಿಸ್ ಮಾಡಿಕೊಳ್ಳುತ್ತಾ ಹೋದೆ. ಎದುರಾಗುವ ಪ್ರತೀ ಗಂಡಸಿನಲ್ಲೂ ಅಪ್ಪ ಕಾಣುತ್ತಾನೇನೋ ಎಂದು ಹುಡುಕಿದೆ. 1st semನಿಂದ 6th semಗೆ ಬರುವಷ್ಟರಲ್ಲಿ ಮಿನಿಮಮ್ ಹತ್ತು ಹುಡುಗರ ಜೊತೆ ಫ್ಲರ್ಟ್ ಮಾಡಿದ್ದೆ. ಪರಿಚಯವಾಗುವ ಪ್ರತೀ ಹುಡುಗನಲ್ಲೂ ಅಪ್ಪನನ್ನು ಹುಡುಕುತ್ತಿದ್ದೆ, ಅಪ್ಪ ಸಿಗದೇ ಇದ್ದರೆ ಇನ್ನೊಬ್ಬನ ಜೊತೆ ಫ್ಲರ್ಟ್ ಮಾಡುತ್ತಿದ್ದೆ. ಆದರೆ ಯಾವ ಹುಡುಗನೂ ಅಪ್ಪನ ಕಾಲು ಉಗುರಿನ ಸಮಕ್ಕೂ ಬರಲಿಲ್ಲ ಕಣೋ. ಆಗ ಕಂಡವನು ನೀನು ಜ್ಯೂನಿ.. ನಂಗಿಂತ ಎರಡು ವರ್ಷ ಜ್ಯೂನಿಯರ್. Freshers day ನಾವು pre-final year ಹುಡುಗಿಯರು ಸೇರಿ ನಿನ್ನ rag ಮಾಡಿದ್ದು ಇನ್ನೂ ನೆನಪಿದೆ. ನಿನ್ನ ಚಿಗುರು ಮೀಸೆ, bushy ಗಡ್ಡ, silky ಕೂದಲು, ನಿಂತ ನಿಲುವು, ನೀಲಿ ಬಣ್ಣದ ನಿನ್ನ honda activa ನೋಡುತ್ತಿದ್ದ ಹಾಗೆ, ಹತ್ತು ವರ್ಷದ ಹಿಂದೆ ಕಳೆದುಕೊಂಡಿದ್ದ ಅಪ್ಪನೇ ಮತ್ತೆ ಬಂದು ಎದುರಿಗೆ ನಿಂತಂತೆ ಆಗಿತ್ತು ನಂಗೆ! ಅವತ್ತೇ ರಾತ್ರಿ ನನ್ನ ಬ್ಯಾಚ್ ಹುಡುಗಿಯರನ್ನು ಕರೆದು ಹೇಳಿದೆ, "blue honda activaದಲ್ಲಿ ಬರ್ತಾನಲ್ವಾ ಒಬ್ಬ juni, ಅದೇ ಕಣೇ first year C section, ಅವ್ನ ಮೇಲೆ ಕ್ರಷ್ಷಾಗಿದೆ ನಂಗೆ. Pls don't trouble my guy hereafter!"


"ನಾಳೆ arts galleryಯಲ್ಲಿ ನನ್ನ ಪೇಂಟಿಂಗುಗಳ exhibition ಇದೆ, ಬನ್ನಿ ದೀದೀ" ಎಂದು ನೀನು invite ಮಾಡಿದ ದಿನ ನನ್ನ ಕಣ್ಣರಳಿತ್ತು. ರಾಧಾಕೃಷ್ಣರ ಪೇಂಟಿಂಗುಗಳ ಮಧ್ಯೆ ನಂಗೆ ಎದ್ದು ಕಾಣಿಸಿದ್ದು ಧ್ಯಾನಸ್ಥನಾಗಿರುವ ಬುದ್ಧ! ಯಾಕೋ ಗೊತ್ತಿಲ್ಲ, the moment i saw your painting of Buddha, I fell in love with you rascal! ಆಮೇಲೆ ನಂಗೆ ಮೈಸೂರು ಸುತ್ತಬೇಕು ಅಂತಾ ಆಸೆಯಾದಾಗಲೆಲ್ಲಾ ನಿಂಗೊಂದು sms ಕಳಿಸುತ್ತಿದ್ದೆ. ಸೀನಿಯರ್ ಕರೆಯುತ್ತಿದ್ದಾಳೆ ಅನ್ನೋ ಭಯ ಭಕ್ತಿಯಿಂದ ನಾನು ಕರೆದ ತಕ್ಷಣ ನಿನ್ನ ಲಟಾರಿ activa ತೆಗೆದುಕೊಂಡು ನನ್ನ ಹಾಸ್ಟೆಲ್ ಎದುರು ಬರುತ್ತಿದ್ದೆ. ನಿನ್ನ ಸ್ಕೂಟರಿನಲ್ಲಿ, ನಿನ್ನ ಹೆಗಲು ಹಿಡಿದು ಕುಳಿತು ಚಾಮುಂಡಿ ಬೆಟ್ಟಕ್ಕೆ ಹೋಗೋದಂದ್ರೆ ನಂಗೆ ಎಲ್ಲಿಲ್ಲದ ಖುಷಿ! ಸಂಜೆ ನನ್ನ ಸೇಫಾಗಿ ಹಾಸ್ಟೆಲ್ ತಲುಪಿಸಿ, "good night ದೀದೀ, ನಾಳೆ ಸಿಗ್ತೀನಿ" ಅಂದವನಿಗೆ ನಾನು ಕರ್ಟೆಸಿಗೂ ಒಂದು thanks ಹೇಳದೆ "f*** off, you ash**" ಎಂದು ಬೈದು ಕಳಿಸುತ್ತಿದ್ದೆ. ಇಷ್ಟ ಪಡೋ ಹುಡುಗ ಮಾತು ಮಾತಿಗೊಂದು ಸಲ ದೀದೀ ದೀದೀ ಅಂತಾ ಕರೆಯುತ್ತಿದ್ದರೆ, ನಂಗೆಷ್ಟು ಹೊಟ್ಟೆ ಉರಿದಿರಬಹುದು ನೀನೇ ಯೋಚಿಸು!


ಒಂದು ವರ್ಷ ನಿನ್ನ ಜೊತೆ ಮೈಸೂರು ಸುತ್ತಿದರೂ, ನಿಂಗೆ ನನ್ನ ಮನಸ್ಸು ಅರ್ಥವಾಗಲಿಲ್ಲ. ಇನ್ನೇನು ನನ್ನ ಕೋರ್ಸು ಮುಗಿಯುತ್ತಾ ಬಂದಿತ್ತು. ನೀನು M1, M2, Basic Electronics, CCP ಪಾಸ್ ಮಾಡೋಕಾಗದೆ detain ಆಗಿದ್ದೆ. Ethnic dayಗೆ ನಿನ್ನ impress ಮಾಡ್ಬೇಕು ಅಂತಾ ನಾನು ಕಷ್ಟಪಟ್ಟು ಸೀರೆ ಉಟ್ಕೊಂಡು ಬಂದ್ರೆ, ನೀನು ದರಿದ್ರದೋನು ಕಾರಿಡಾರಲ್ಲಿ ಸಿಕ್ಕವನೇ "ದೀದೀ, u luk gorgeous in saree!" ಅಂದು ಬಿಡೋದಾ?! ಅದೆಲ್ಲಿತ್ತೋ ಕೋಪ, ನಿನ್ನ ಕೈ ಹಿಡಿದುಕೊಂಡು ಖಾಲಿ ಕ್ಲಾಸ್'ರೂಮ್ ಒಳಗೆ ಕರೆದುಕೊಂಡು ಹೋಗಿ ಕಪಾಳಕ್ಕೊಂದು ಬಾರಿಸಿ, "ಇನ್ನೊಂದ್ಸಲ ದೀದೀ ಅಂದ್ರೆ ಸಾಯಿಸ್ತೀನಿ, ನಂಗೆ ನೀನಂದ್ರೆ ಇಷ್ಟ. I love you as#@%" ಅಂತಾ ಹೇಳಿ ನಿನ್ನ ಕೆನ್ನೆಗೊಂದು ಮುತ್ತು ಕೊಟ್ಟು ಹೊರಗೆ ಓಡಿ ಬಂದವಳ ಸೀರೆ ಬೆವರಿನಲ್ಲಿ ಒದ್ದೆಯಾಗಿತ್ತು, ಮುಖ ಕೆಂಪಾಗಿ, ಕಣ್ಣಲ್ಲಿ ನೀರು ತುಂಬಿತ್ತು!


ಅದಾಗಿ ಎರಡು ದಿನಕ್ಕೆ ನಾನು ಹಾಸ್ಟೆಲ್ ಬಿಟ್ಟು ನನ್ನ ಲಗೇಜ್ ಸಮೇತ ನಿನ್ನ ರೂಮಿಗೆ shift ಆದೆ. ಕಾಲೇಜಿನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿದರು. But who gives a damn f&@#? ನಿನ್ನ ರೂಮು ಕ್ಲೀನ್ ಮಾಡಿ, ಬಾ M1 ಹೇಳಿಕೊಡ್ತೀನಿ ಅಂತಾ ಪಕ್ಕದಲ್ಲಿ ಕೂರಿಸಿಕೊಂಡು differential calculus ಶುರು ಮಾಡಿದರೆ; ಪುಣ್ಯಾತ್ಮ ನೀನು 'differentiation of log x' ಏನು ಅಂತಾ ಕೇಳಿದರೆ ನಿನ್ನ ಕಿಡ್ನಿ ಕೇಳಿದೆನೇನೋ ಅನ್ನೋ ಹಾಗೆ ಗಾಬರಿಯಾಗಿ ಕಣ್ಣು ಕಣ್ಣು ಬಿಟ್ಟು ನೋಡುತ್ತಿದ್ದೆ! ಅದ್ಭುತವಾಗಿ ಪೇಂಟಿಂಗ್ ಮಾಡೋ ನೀನು, ಚೆಂದದ ಕವಿತೆಗಳನ್ನು ಬರೆಯೋ ನೀನು, inter zonal ಕ್ರಿಕೆಟ್ ಮ್ಯಾಚಲ್ಲಿ ಸೆಂಚುರಿ ಬಾರಿಸಿದ್ದ ನೀನು, quantum physicsನಿಂದ ಅಧ್ಯಾತ್ಮದವರೆಗೆ ಗಂಟೆಗಟ್ಟಲೆ ಮಾತಾಡೋ ನೀನು ಮ್ಯಾಥ್ಸಲ್ಲಿ ಮಾತ್ರ ಪೆದ್ದುಗುಂಡ! Study vacations ಮುಗಿಯೋ ಹೊತ್ತಿಗೆ, ನಿಂಗೆ M1, M2 ಹೇಳಿಕೊಡೋ ಬದಲು, ನಾನೇ ಇನ್ನೊಂದ್ಸಲ field theory ಓದ್ಬೋದಿತ್ತು ಅನ್ನಿಸುವಷ್ಟು ತಲೆ ಕೆಟ್ಟೋಗಿತ್ತು ನಂಗೆ!


ಆದರೆ ನಿನ್ನ ಜೊತೆ ತುಂಬಾ ದಿನ ಇರೋಕೆ ಆಗಲಿಲ್ಲ. Infosysನಲ್ಲಿ ಟ್ರೈನಿಯಾಗಿ join ಆಗಿ, ಕಂಪನಿಯ ಮೈಸೂರು ಕ್ಯಾಂಪಸ್ ಸೇರಿದ ಎರಡು ವರ್ಷಗಳಲ್ಲಿ ನಂಗೆ promotion ಸಿಕ್ಕಿತು. ಅಷ್ಟು ಹೊತ್ತಿಗೆ ನೀನು HMT, Turbo back ಇಟ್ಕೊಂಡೇ final yearಗೆ ಬಂದಿದ್ದೆ. ಒಂದೇ ಊರಲ್ಲಿದ್ದರೂ ವೀಕ್'ಡೇಸಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರೋ ಕಷ್ಟ ಇಬ್ಬರಿಗೂ ಅರ್ಥವಾಗಿತ್ತು. ನೀನು ಫುಟ್'ಪಾತಲ್ಲಿ ಸಿಗೋ ಪ್ಲಾಸ್ಟಿಕ್ ರಿಂಗಿನ ಮೇಲೆ ನಮ್ಮಿಬ್ಬರ ಹೆಸರು ಬರೆಸಿ ತಂದು ನನ್ನ ಬೆರಳಿಗೆ ಹಾಕಿ will u marry me? ಎಂದು ಹಿಂದಿನಿಂದ ತಬ್ಬಿಕೊಂಡ ದಿನ Feb. 14, 2015! "ಮದ್ವೆ ಆಗ್ಲೇಬೇಕೇನೋ, we will live together baby!" ಅಂದರೂ ನೀನು ಕೇಳಲಿಲ್ಲ. ಕೊನೆಗೆ ನಿನ್ನ ಹಠವೇ ಗೆದ್ದಿತು. ಚಾಮುಂಡಿ ಬೆಟ್ಟದಲ್ಲಿ ದೇವರ ಎದುರು ಹಾರ ಬದಲಾಯಿಸಿಕೊಂಡು ನಾವು officially ಗಂಡ ಹೆಂಡತಿಯರಾದೆವು. ನನ್ನ ತಲೆಯ ಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ, ನಮ್ಮಿಬ್ಬರನ್ನು ತಬ್ಬಿಕೊಂಡು ಆಶೀರ್ವಾದ ಮಾಡಲು ಅವತ್ತು ಅಪ್ಪ ಇರ್ಬೇಕಿತ್ತು ಅಂತಾ ಕ್ಷಣದಲ್ಲೂ ಅನ್ನಿಸ್ತಿತ್ತು! ಅವತ್ತೇ ರಾತ್ರಿ ನನ್ನಿಂದ ಮಮ್ಮಿ ಅಂತಾ ಕರೆಸಿಕೊಳ್ಳುತ್ತಿದ್ದ ಹೆಂಗಸು ಕಾಲ್ ಮಾಡಿ "ಕುಲ ಗೋತ್ರ ಗೊತ್ತಿಲ್ಲದೋನ ಮದ್ವೆ ಆಗಿದಿಯಲ್ಲಾ, ಇವತ್ತು ನೀನು ನನ್ನ ಪಾಲಿಗೆ ಸತ್ತೋದೆ" ಎಂದೆಲ್ಲಾ ಬಾಯಿಗೆ ಬಂದಂತೆ ಮಾತಾಡಿದಳು. Who cares! ಅವಳ ಪಾಲಿಗೆ ನಾನು ಸಾಯುವ ತುಂಬಾ ವರ್ಷಗಳ ಮುಂಚೆಯೇ ನನ್ನ ಪಾಲಿಗೆ ಅವಳು ಸತ್ತುಹೋಗಿದ್ದಳು. ಆದರೆ ಅವಳು ಇಟ್ಟಿದ್ದ 'ಮಯಾಂಕಾ' ಅನ್ನೋ ಹೆಸರು ಮಾತ್ರ ಅವಳನ್ನು ನೆನಪಿಸಿ ಚುಚ್ಚುತ್ತಿತ್ತು. ಮಾರನೇ ದಿನವೇ ಅಫಿಡವಿಟ್ ಕೊಟ್ಟು ನನ್ನ ಹೆಸರನ್ನು 'ಶ್ರೀಗೌರಿ ಕೃಷ್ಣಪ್ರಸಾದ್' ಎಂದು ಬದಲಿಸಿಕೊಂಡೆ. ಕೃಷ್ಣಪ್ರಸಾದ್ ಅಪ್ಪನ ಹೆಸರು! ನೆನಪಿಟ್ಕೋ, ನಾನು ಯಾವತ್ತಿದ್ದರೂ ಮೊದಲು ನನ್ನ ಡ್ಯಾಡಿಯ ಮಗಳು, ಆಮೇಲೆ ನಿನ್ನ ಹೆಂಡತಿ! ಆಮೇಲೆ? ಆಮೇಲೇನೂ ಇಲ್ಲ! ಅಪ್ಪನ ಮಗಳು ಮತ್ತು ನಿನ್ನ ಹೆಂಡತಿ ಅನ್ನೋದನ್ನ ಬಿಟ್ಟರೆ ನಂಗೆ ಮತ್ತಿನ್ಯಾವ ಐಡೆಂಟಿಟಿಯೂ ಬೇಕಿಲ್ಲ ಚಿನ್ನೀ!


ಹೇಳೋಕೆ ಮರೆತೆ! ನೀನು ಹೋದ ಅರ್ಧ ಗಂಟೆಗೆ ನಿನ್ನ ಫ್ರೆಂಡ್ಸು ಕಾಲ್ ಮಾಡಿದ್ದರು. ನೆಕ್ಸ್ಟ್ ವೀಕೆಂಡು ನಮ್ಮ ಮನೇಲೆ ಪಾರ್ಟಿ ಮಾಡ್ತಾರಂತೆ. ಎಷ್ಟು ಜನ ಫ್ರೆಂಡ್ಸನ್ನಾದ್ರೂ ಕರ್ಕೊಂಡು ಬಾ, ಅಡುಗೆ ಮಾಡಿ ಹಾಕ್ತೀನಿ. ಆದ್ರೆ ಅವಳಿದಾಳಲ್ಲ, bulldog ಮುಖದೋಳು ನಿನ್ನ ಫ್ರೆಂಡ್ ದೇವಿಕಾ, ಅವಳೇನಾದರೂ ಮನೆಯೊಳಗೆ ಬಂದ್ರೆ, ಅವತ್ತೇ ನಿಂಗೆ ಡಿವೋರ್ಸು ಕೊಟ್ಟು ಮನೆ ಬಿಟ್ಟು ಹೋಗ್ತೀನಿ ಅಷ್ಟೇ! ಮಾನ, ಮರ್ಯಾದೆ ಇಲ್ಲದೋಳು, ನನ್ನ ಮುಂದೆಯೇ ನಿನ್ನ ಹೆಗಲ ಮೇಲೆ ಕೈಹಾಕಿ ಕೆನ್ನೆಗೆ ಕೆನ್ನೆ ತಾಗಿಸಿ selfie ತೆಗಿಯೋದಲ್ದೆ, your husband is simply amazing ಅಂತಾಳೆ ಹಂದಿ, ನಾಯಿ, bitch!!
ಇವತ್ತು ತುಂಬಾ ಮಾತಾಡಿದೆ. ಇಷ್ಟು ಹೊತ್ತಿಗೆ ನಿನ್ನ ಕೋಪವೂ ಇಳಿದು ಹೋಗಿ ಮನೆಗೆ ಬಂದಿರ್ತೀಯಾ ಅಂತಾ ನಂಗೊತ್ತು! ಟೇಬಲ್ ಮೇಲೆ ಇಟ್ಟಿದ್ದ ಪತ್ರ ನಿಂಗೆ ಸಿಕ್ಕಿದೆ ಅಂದ್ಕೋತೀನಿ. ನಿನ್ನ ಪೇಂಟಿಂಗುಗಳಿಗೆ ಆರ್ಡರ್ ಮಾಡಿದ್ದೋರು ಅಡ್ವಾನ್ಸ್ ಚೆಕ್ ಕಳಿಸಿದ್ದಾರೆ. ನಿಂಗೆ ಇಷ್ಟವಾದ carrot ಹಲ್ವಾ ಮಾಡಿ ಫ್ರಿಜ್ಜಲ್ಲಿ ಇಟ್ಟಿದೀನಿ. ಫ್ಲಾಸ್ಕ್ ಒಳಗೆ ಕಾಫೀ ಇದೆ. ನಿಂಗೆ ದುಡ್ಡು ಸಿಕ್ಕಿದ ಖುಷಿಗೆ ನಾಳೆ ನನ್ನ ಪಿವಿಆರ್'ಗೆ ಕರ್ಕೊಂಡೋಗು, ನನ್ನ ಶಾರುಖ್'ದು ಹೊಸ ಮೂವೀ FAN ರಿಲೀಸ್ ಆಗಿದೆ. ಇನ್ನೇನು wedding anniversary ಬೇರೆ ಬಂತು, ನಂಗೊಂದು ರೇಶ್ಮೆ ಸೀರೆ ಬೇಕು ಗ್ರೀನ್ ಕಲರ್'ದು, ಜೊತೆಗೊಂದು diary milk silk bubbly! ಪಕ್ಕದ ಮನೇಲಿ ನಿರ್ಮಲಾ ಆಂಟಿ ಜೊತೆ 'ಅಗ್ನಿಸಾಕ್ಷಿ' ಸೀರಿಯಲ್ ನೋಡ್ತಾ ಕೂತಿದೀನಿ, ಇನ್ನು ಹತ್ತು ನಿಮಿಷಕ್ಕೆ ಮನೇಲಿರ್ತೀನಿ baby. ಸಲಾನೂ ಜಗಳ ಸ್ಟಾರ್ಟ್ ಮಾಡಿದ್ದು ನಾನೇ ಆದರೂ as usual ನೀನೆ ಮೊದ್ಲು sorry ಕೇಳ್ಬೇಕು. ಇವತ್ತು ಕಿಚನ್ ಕೆಲಸ ನಿಂದೇ ಜವಾಬ್ದಾರಿ, ನನ್ನ ಒಬ್ಬಳನ್ನೇ ಮನೆ ಬಿಟ್ಟು ಹೋಗಿದ್ದಕ್ಕೆ ನಿಂಗೆ punishment ಇದು. ಘಮ್ ಅನ್ನೋ ಹಾಗೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡಿ, ನಿನ್ನ ತೊಡೆ ಮೇಲೆ ಕೂರಿಸಿಕೊಂಡು ನೀನೇ ತಿನ್ನಿಸ್ಬೇಕು. ಒಂದೊಂದು ತುತ್ತಿಗೂ ನಿನ್ನ ಮೀಸೆ ಎಳೆದು, ಗಡ್ಡಕ್ಕೆ ನನ್ನ ಕೆನ್ನೆ ಉಜ್ಜಿ ಕಚಗುಳಿಯಾದಾಗ ನಗೋ ಸುಖ ನಂಗಿವತ್ತು ಬೇಕು. ನಿನ್ನದೊಂದು ದೊಗಳೆ ಷರ್ಟು ಹಾಕಿಕೊಂಡು, ನಿನ್ನ ತಬ್ಬಿಕೊಂಡು ಮಲಗುವ comfort ಬೇಕು!


ಆಮೇಲೆ ಇನ್ನೊಂದು ವಿಷ್ಯ. ಹೇಳೋಕೆ ನಂಗೆ ನಾಚಿಕೆ ಆಗ್ತಿದೆ (ನಿಂಗೂ ನಾಚಿಕೆ ಬೇರೆ ಆಗುತ್ತಾ ಅಂತಾ ಕೇಳ್ಬೇಡ). ನಂಗೆ ಮಗು ಬೇಕು. ಮುಂದಿನ ತಿಂಗಳು ಇಷ್ಟು ಹೊತ್ತಿಗೆ ನಿನ್ನ exams ಮುಗಿದಿರುತ್ತೆ ಅಲ್ವಾ? ಊಟಿಯ ಹೊಟೆಲ್ ಒಂದರಲ್ಲಿ ಹದಿನೈದು ದಿನಕ್ಕೆ ರೂಮ್ ಬುಕ್ ಮಾಡಿದೀನಿ, ಈಗ ಅಲ್ಲಿ ತುಂಬಾ ಛಳಿ ಇರುತ್ತಂತೆ!! ನಿನ್ನೆ ಸಂಜೆಯಿಂದ ಒಂಥರಾ ತಲೆನೋವು, ಬೆನ್ನುನೋವು, depression, moodswing, ಯಾವಾಗ್ಲೂ ಏನಾದ್ರೂ ತಿಂತಾ ಇರ್ಬೇಕು ಅನ್ನಿಸ್ತಿದೆ ಕಣೋ. ನೀನೂ ನನ್ನ ಹೀಗೆ ಒಬ್ಬಂಟಿಯಾಗಿ ಬಿಟ್ಟುಹೋದರೆ ನಾನು ಸತ್ತೋಗ್ತೀನಿ ಅಷ್ಟೇ! ಬೆಳಿಗ್ಗೆ ನನ್ನ ಮಾತಿಂದ ನಿಂಗೆ hurt ಆಗಿದ್ರೆ, I am sorry ಚಿನ್ನೀ! ನನ್ನ ಪ್ರಾಣ ನೀನು, u r my loveliest darling hubby. ಲವ್ ಯೂ, ಲೋವ್ ಯೂ, ಲೂವ್ ಯೂ, ಲೇವ್ ಯೂ, tight hugs, Muah!
                                                                                                              ನಿನ್ನ wify..




(ಸವಿರಾಜ್ ಎಸ್ ಆನಂದೂರು)